ದಾವಣಗೆರೆ, ಜು. 18- ಇಲ್ಲಿನ 33ನೇ ವಾರ್ಡ್ನಲ್ಲಿ ಪಾರ್ಕ್ ಪಕ್ಕದ ವಾಹನ ನಿಲುಗಡೆ ಜಾಗ ಒತ್ತುವರಿಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ವಿದ್ಯಾನಂದನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿ. ಕುಸುಮ ಸ್ಪಷ್ಟಪಡಿ ಸಿದ್ದಾರೆ. ವಿದ್ಯಾಸಂಸ್ಥೆಯವರು ಜಾಗ ಒತ್ತುವರಿ ಮಾಡಿದ್ದಾರೆ ಎಂದು ಪಿ.ರುದ್ರೇಶ್ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಇಲ್ಲಿನ 3 ಮೀಟರ್ ಜಾಗ ಶಾಲೆಗಾಗಿಯೇ ಬಿಟ್ಟಿರುವ ಪಾತ್ವೇ ಜಾಗವಾಗಿದೆ. ಅದರಾಚೆಗೆ ಪಾರ್ಕ್ ಇದೆ. ಈ ಬಗ್ಗೆ ದಾಖಲೆ ಪತ್ರದಲ್ಲೂ ನಮೂದಾಗಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
September 14, 2024