ವಿಹಂಗಮ ಯೋಗ ಸಂತ ಸಮಾಜದ ಸ್ಥಾಪನೆ. ಶತಾಬ್ದ ಸಮಾರೋಪ ಮಹೋತ್ಸವ 25,000 ಕುಂಡಗಳನ್ನು ಇರಿಸಿ ಸ್ವರ್ವೇದ ಜ್ಞಾನ ಮಹಾಯಜ್ಞ ನಿಮಿತ್ತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಯೋಜಿಸಲಾ ಗಿರುವ ರಾಷ್ಟ್ರವ್ಯಾಪಿ ಸಂಕಲ್ಪ ಯಾತ್ರೆಯು ಅನೇಕ ರಾಜ್ಯಗಳಿಂದ ಪ್ರವಾಸಗೊಂಡು ಇಂದು ನಗರವನ್ನು ತಲುಪಲಿದೆ. ದಿವ್ಯ ಸ್ವರ್ವೇದ ಕಥೆಯ ಪ್ರವಕರ್ತಕ ಸಂತಶ್ರೀ ವಿಜ್ಞಾನ ದೇವಜೀ ಮಹಾರಾಜ ಪಾವನ ಉಪಸ್ಥಿತಿಯಲ್ಲಿ ಸ್ವರ್ವೇದ ಕಥಾಮೃತ ಸಮಾರೋಪ ಹಾಗೂ ಸಾಧನ ಸಮಾವೇಶವು ದಾವಣಗೆರೆ – ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಸಂಜೆ 5 ಗಂಟೆಗೆ ನೆರವೇರಲಿದೆ.
February 19, 2025