ದಾವಣಗೆರೆ, ಜು. 10 – ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ತಾಲ್ಲೂಕು ಅಧ್ಯಕ್ಷರಾಗಿ ಶಂಭು ಎಸ್. ಉರೇಕೊಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸ್ಥಾನಕ್ಕೆ ಬಿ.ಎಂ. ರವಿ ಆವರಗೊಳ್ಳ, ಕೆ.ಎಂ. ಚನ್ನಪ್ಪ ಗುಮ್ಮನೂರು, ಪಿ.ಜಿ. ರಾಜಶೇಖರ್, ಮಲ್ಲಿಕಾರ್ಜುನ್ ಕಟ್ಟಿಮನಿ, ಕಾರ್ತಿಕ್ ಹಿರೇಮಠ್, ಪ್ರಭುಕುಮಾರ್ ಎಂ.ಎನ್. ಗೌಡ್ರು, ಎಸ್.ಆರ್. ಶಿವಕುಮಾರ್, ಬಸವರಾಜ್ ಗುಡಿಹಳ್ಳಿ, ಗುರುಶಾಂತ ವಿ. ಸೋಗಿ, ಬಿ.ಆರ್. ಅನಿಲ್, ಎಂ.ಎನ್. ಶಿವಾನಂದ್, ಎನ್.ಎ. ಸುನಿಲ್, ಕೆ.ಎಸ್. ನವೀನ್ ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ಸದಸ್ಯರಾಗಿ ಸುಮಿತ್ರ, ಪ್ರಭಾದೇವಿ ಜಯದೇವ, ಕೆ. ಕಾವ್ಯ, ಸುನೀತ, ನೀಲ ಗುಂದ ಜಯ್ಯಮ್ಮ, ಕೆ.ಇ. ಅನುಷಾ, ಸಿ.ಜೆ. ಶಾಂತ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ದಾವಣಗೆರೆ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಉಪ ಚುನಾವಣಾಧಿಕಾರಿ ವಿ. ಶಿವಮೂರ್ತಿಸ್ವಾಮಿ ತಿಳಿಸಿದ್ದಾರೆ.