ದಾವಣಗೆರೆ, ಜೂ.22- ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಳಗೆರೆ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ವೇಳೆ ದಾಳಿ ಮಾಡಿರುವ ಪೊಲೀಸರು 15 ಜನರನ್ನು ವಶಕ್ಕೆ ಪಡೆದು 5.54,400 ರೂ. ಹಾಗೂ ಇಸ್ಪೀಟ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಪಿಐ ಇಮ್ರಾನ್ ಬೇಗ್, ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿಗಳಾದ ಮಜೀದ್, ರಮೇಶ್ ನಾಯ್ಕ, ಆಂಜನೇಯ, ಪ್ರಭಾಕರ, ಮಸ್ತಕ್ ಅಹ್ಮದ್, ಮಹಮ್ಮದ್ ಸೈಪುಲ್ಲಾ, ಚನ್ನಗಿರಿ ಠಾಣೆಯ ಎ.ಎಸ್.ಐ ಶಶಿಕುಮಾರ್, ನರೇಂದ್ರ ಭಾಗವಹಿಸಿದ್ದರು.
February 18, 2025