ಹಂಪನಾರವರಿಗೆ ಸಿದ್ದೇಶ್ ಕುರ್ಕಿ ಸಂತಾಪ

ದಾವಣಗೆರೆ ಜೂ. 23 –  ಸಾಹಿತಿ ಕಮಲಾ ಹಂಪನಾ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಸಿದ್ದೇಶ್ ಕುರ್ಕಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಅಪರೂಪದ ಜೋಡಿ ಹಂಪನಾ ದಂಪತಿಗಳ ಕೊಡುಗೆ ಅನನ್ಯ. ಹಂಪನಾ ದಂಪತಿಗಳು ಸಂಸಾರದ ಬದುಕನ್ನು ಸಾಗಿಸಿದಂತೆ, ಸಾಹಿತ್ಯ ಕ್ಷೇತ್ರದಲ್ಲೂ ಯಶಸ್ಸು ಕಂಡಿರುವ ಅಪರೂಪದ ಜೋಡಿ ಎಂದು ಅವರು ಹೇಳಿದ್ದಾರೆ.

ಕಮಲಾರವರು ಸಾಹಿತ್ಯ ಕ್ಷೇತ್ರದಲ್ಲಿ 60 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡದ ಯಶಸ್ವಿ ಮಹಿಳಾ ಸಾಹಿತಿಯಾಗಿ ಪ್ರಸಿದ್ಧರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

error: Content is protected !!