ನಗರದ ಆರ್ಯ-ಈಡಿಗರ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಜೂ. 21 – ಜಿಲ್ಲಾ ಆರ್ಯ ಈಡಿಗರ ಸಂಘದ ವಿನೋಬನಗರದ ಆರ್ಯ ಈಡಿಗ ವಿದ್ಯಾರ್ಥಿ ನಿಲಯಕ್ಕೆ ಹಾಗೂ ಸರಸ್ವತಿ ಬಡಾವಣೆಯಲ್ಲಿರುವ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ 2024-25ನೇ ಸಾಲಿಗೆ ಸೇರ ಬಯಸುವ ಅರ್ಹ ಆರ್ಯ ಈಡಿಗ ಸಮಾಜದ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಪಿ.ಯು.ಸಿ. ಸೈನ್ಸ್‌, ಬಿ.ಎಸ್ಸಿ, ಬಿ.ಕಾಂ. ಬಿ.ಸಿ.ಎ., ಬಿ.ಬಿ.ಎಂ., ಎಂ.ಎಸ್ಸಿ. ಎಂ.ಕಾಂ. ಹಾಗೂ ತಾಂತ್ರಿಕ ಕೋರ್ಸ್‌ಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ 15ನೇ ಜುಲೈ 2024ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. 

ದಾವಣಗೆರೆ ಜಿಲ್ಲೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು  ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶಂಕರ್ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ ದಾವಣಗೆರೆ ಜಿಲ್ಲಾ ಈಡಿಗ ಸಂಘ, ಪಿ.ಬಿ.ರಸ್ತೆ, ವಿನೋಬನಗರ, ದಾವಣಗೆರೆ ಹಾಗೂ ಹರಿಹರ, ಜಗಳೂರು, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಈಡಿಗರ ಸಂಘದ ಪದಾಧಿಕಾರಿಗಳ ಬಳಿಯಲ್ಲಿ ಅರ್ಜಿಗಳು ದೊರೆಯುತ್ತವೆ. ವಿವರಕ್ಕೆ ಕಾರ್ಯದರ್ಶಿ ಎ.ನಾಗರಾಜ (98453 55008), ಹಾಸ್ಟೆಲ್‌ ವಾರ್ಡನ್‌ (88922 66468) ಅವರನ್ನು ಸಂಪರ್ಕಿಸಬಹುದು.

error: Content is protected !!