ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ, ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ನೆರವೇರಿಸಲಾಗುವುದು.
ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ ಸತೀಶ್ ಧಾರವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಯವಿಭವ ವಿದ್ಯಾಸಂಸ್ಥೆಯ ನಿವೃತ್ತ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಶ್ರೀ ಜಗದ್ದಗುರು ಮುಖ್ಯ ಅತಿಥಿಗಳಾಗಿ ಕಿರುವಾಡಿ ಗಿರಿಜಮ್ಮ, ಅಣಬೇರು ಮಂಜಣ್ಣ, ಶಿವಬಸಯ್ಯ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಹಿಮೋಫಿಲಿಯಾ ಸೊಸೈಟಿಯ ಸಹಾಯಕರಾದ ಚಿನ್ನಮ್ಮ ಅವರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಗೀತ ಶಿಕ್ಷಕ ಶಿವಬಸಯ್ಯ ಅವರಿಂದ ಬೆಳಿಗ್ಗೆ 10 ರಿಂದ 11ರವರೆಗೆ ಡಾ. ಪಂ.ಪುಟ್ಟರಾಜ ಗವಾಯಿಗಳವರ ವಚನ ಶಿಬಿರ ಏರ್ಪಡಿಸಲಾಗಿದೆ.