ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜಾದ ನಗರದ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯುತ್ ವಿಭಾಗದ ವತಿಯಿಂದ ಇಂದು ಐಇಇಇ ಸಹಯೋಗದಲ್ಲಿ ಒಂದು ದಿನದ ರಿಸರ್ಚ್‌ ಮ್ಯಾನುಸ್ಕ್ರಿಪ್ಟ್ ರೈಟಿಂಗ್ ಅಂಡ್ ಪಬ್ಲಿಕೇಷನ್ ವರ್ಕ್‌ಶಾಪ್‌ ನ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ಸ್ಮಾರ್ಟ್ ಸಿಟಿ ಕಾರ್ಪೊರೇಷನ್‌ ಲಿಮಿಟೆಡ್‌ನ ಆಡಳಿತಾಧಿಕಾರಿ  ವೀರೇಶ್ ಕುಮಾರ್, ಜೈನ್ ತಾಂತ್ರಿಕ ವಿಶ್ವವಿದ್ಯಾ ಲಯದ ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್, ವಿಶೇಷ ಅತಿಥಿಗಳಾಗಿ ಐಇಇಇನ ಹಿರಿಯ ಅಧಿಕಾರಿ ಡಾ. ಧನುಕುಮಾರ್ ಪಟ್ಟಣಶೆಟ್ಟಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು.  ಪ್ರಾಂಶುಪಾಲ ಡಾ.ಡಿ.ಪಿ ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದ ಕಾರ್ಯದರ್ಶಿ ಯಾಗಿ ಪ್ರಾಧ್ಯಾಪಕರಾದ ಡಾ.ಹೆಚ್.ಸಿ. ಮೌನೇಶ್ವರಚಾರ್, ಡಾ. ಎಸ್. ಮಂಜಪ್ಪ ಉಪಸ್ಥಿತರಿರುವರು ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆ.ಎಸ್. ಅಪ್ರಮೇಯ ತಿಳಿಸಿದ್ದಾರೆ.

error: Content is protected !!