ಎಸ್ಸೆಸ್ ಹುಟ್ಟುಹಬ್ಬ: ಅಭಿಮಾನಿ ಬಳಗದಿಂದ ಸಾಮಾಜಿಕ ಕಾರ್ಯಕ್ರಮಗಳು

ಎಸ್ಸೆಸ್ ಹುಟ್ಟುಹಬ್ಬ: ಅಭಿಮಾನಿ ಬಳಗದಿಂದ ಸಾಮಾಜಿಕ ಕಾರ್ಯಕ್ರಮಗಳು

ದಾವಣಗೆರೆ, ಜೂ.12- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಇದೇ ದಿನಾಂಕ 16ಕ್ಕೆ 93ನೇ ವರ್ಷ ಪೂರೈಸಿ 94ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿ ಬಳಗದಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 13ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಆವರಗೆರೆಯ ಗೋಶಾಲೆಯಲ್ಲಿರುವ ಗೋವುಗಳಿಗೆ ಮೇವು ವಿತರಿಸಲಾಗುವುದು ಎಂದರು.

ದಿನಾಂಕ 14ರ ಶುಕ್ರವಾರ ಬೆಳಿಗ್ಗೆ 11ಕ್ಕೆ ವನಿತಾ ಸಮಾಜದ ಹಿರಿಯ ವನಿತೆಯರಿಗೆ ಸೀರೆ ವಿತರಣೆ ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 15ರ ಶನಿವಾರ ಬೆಳಿಗ್ಗೆ 11ಕ್ಕೆ ಅಂಗವಿಕಲರ ವಸತಿ ಶಾಲೆ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ಕ್ರೀಡಾಪಟುಗಳ ಸಂಘದಿಂದ ಎಸ್.ಎಸ್. ಕಪ್ ಹೆಸರಿನಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗದಿಂದ ದಿನಾಂಕ 16ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಐಎಂಎ ಹಾಲ್‌ನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅಯೂಬ್, ಕೆ.ಜಿ. ಶಿವಕುಮಾರ್, ಎಸ್.ಮಲ್ಲಿಕಾರ್ಜುನ್, ಡೋಲಿ ಚಂದ್ರು, ರಾಜು ಭಂಡಾರಿ, ಮಂಗಳಮ್ಮ, ಮಂಜುಳಮ್ಮ, ರಾಜೇಶ್ವರಿ, ಶುಭಮಂಗಳ, ದ್ರಾಕ್ಷಾಯಣಪ್ಪ, ಕವಿತಾ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

error: Content is protected !!