ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರಿಂದ ಅರ್ಜಿ

ದಾವಣಗೆರೆ, ಜೂ. 12 – ಕೇಂದ್ರ ಸರ್ಕಾರದ ಅಲಿಮ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗವುದಕ್ಕಾಗಿ ಅಲಿಮ್ಕೋ ಸಂಸ್ಥೆ, ಕಾವೇರಮ್ಮ ಸರ್ಕಾರಿ ಶಾಲೆ ಆವರಣ ಕೆ.ಬಿ. ಬಡಾವಣೆ, ದಾವಣಗೆರೆ ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 97936 94269, 08192-295442 ನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!