ರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀನಿವಾಸ್

ರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀನಿವಾಸ್

ಸಾಸ್ವೆಹಳ್ಳಿ, ಜೂ. 11 – ಹೊನ್ನಾಳಿ ತಾಲ್ಲೂಕು ರಾಂಪುರ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಎಚ್.ಟಿ. ರಮೇಶ್ ಅವರ ಅಧಿಕಾರವಧಿ ಪೂರ್ಣಗೊಂಡ  ಹಿನ್ನೆಲೆಯಲ್ಲಿ  ಹಿಂದುಳಿದ `ಅ’  ವರ್ಗ ಮೀಸಲಾತಿ ಪ್ರಕಾರ   ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಎಂ.ಬಿ. ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಸೋಮವಾರ ಗ್ರಾಮ ಪಂಚಾಯ್ತಿಯ ಕಚೇರಿಯಲ್ಲಿ  ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಎಂ.ಬಿ.  ನಾಮಪತ್ರ ಸಲ್ಲಿಸಿದ್ದರು.  ಆದರೆ, ಉಳಿದ ಸದಸ್ಯರು ಯಾರೂ ನಾಮ ಪತ್ರಗಳನ್ನು ಸಲ್ಲಿಸದೇ ಇರುವುದರಿಂದ ಅಂತಿ ಮವಾಗಿ  ಶ್ರೀನಿವಾಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು  ಚುನಾ ವಣಾಧಿಕಾರಿ, ಸಹಾಯಕ ಕೃಷಿ ನಿರ್ದೇಶಕರಾದ ಪ್ರತಿಮಾ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷ ರಮೇಶ್ ಎಚ್.ಟಿ,. ಉಪಾಧ್ಯಕ್ಷರಾದ ಸುಶೀಲಮ್ಮ ಹಾಗೂ ಪಿಡಿಒ ಎ.ಕೆ. ಧರ್ಮಣ್ಣ, ಕಾರ್ಯದರ್ಶಿ ಹನುಮಂತಪ್ಪ ಸೇರಿದಂತೆ, ಇತರರು ಉಪಸ್ಥಿತರಿದ್ದರು.

error: Content is protected !!