ಲಾರಿ ಕಳ್ಳತನದ ಆರೋಪಿ ಬಂಧನ

ದಾವಣಗೆರೆ, ಜೂ.11- ಲಾರಿ ಕಳ್ಳತನದ ಬಗ್ಗೆ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಮಲೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮೇ 31 ರಂದು ರಾತ್ರಿ ಕಡರನಾಯಕನಹಳ್ಳಿ ಗ್ರಾಮದ ಇಟ್ಟಿಗೆ ಬಟ್ಟಿ ಬಳಿ ನಿಲ್ಲಿಸಿದ್ದ ಹತ್ತು ಲಕ್ಷ ರೂ. ಮೌಲ್ಯದ ಭರತ್ ಬೆಂಚ್ ಕಂಪನಿಯ ಲಾರಿ ಕಳ್ಳತನವಾದ ಬಗ್ಗೆ ಜೂ.1ರಂದು ಮಲೇಬೆನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರ ತಂಡವು ಜೂ.1ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕು ಗುಡ್ಡದ ಕಮಲಾಪುರ ಗ್ರಾಮದ ಡ್ರೈವರ್ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ (34) ಎಂಬಾತನನ್ನು ಬಂಧಿಸಿ, ಆತನಿಂದ ಲಾರಿ ಹಾಗೂ ರಾಣೇಬೆನ್ನೂರು ನಗರ ಠಾಣೆಯ 1 ಬೈಕ್ ಕಳವು ಪ್ರಕರಣ ಬೇಧಿಸಿ ಬೈಕ್ ವಶಕ್ಕೆ ಪಡೆದಿದ್ದಾರೆ.

ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು)  ಪ್ರಭು ಡಿ. ಕೆಳಗಿನ ಮನಿ, ಸಿಬ್ಬಂದಿಯವರಾದ ಲಕ್ಷ್ಮಣ, ರಾಜಶೇಖರ್, ಸಂತೋಷಕುಮಾರ್, ಮಲ್ಲಿಕಾರ್ಜುನ, ಜೀಪ್ ಚಾಲಕರಾದ ರಾಜಪ್ಪ, ಮುರುಳಿದರ ಆರೋಪಿ ಪತ್ತೆ ತಂಡದಲ್ಲಿದ್ದರು.

error: Content is protected !!