ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪರ ಹಣ ಹಂಚಿಕೆ : ಬಂಧನ

ಹೊನ್ನಾಳಿ, ಜೂ.3- ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಪರವಾಗಿ ಪದವೀಧರ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನದ ಪ್ರಕ್ರಿಯೆ ನಡೆಯುತ್ತಿದ್ದು, ತಾಲ್ಲೂಕು ಕಚೇರಿಯ ಪದವೀಧರರ ಮತದಾನ ಕೇಂದ್ರದಲ್ಲಿ ದಿನೇಶ್ ಪರ ಹಣದ ಆಮಿಷವೊಡ್ಡಿ ಮತ ಹಾಕಿಸಲು ಯತ್ನಿಸುತ್ತಿದ್ದ ಬಸವನಹಳ್ಳಿ ಗ್ರಾಮದ ಬೀರೇಶ ಮತ್ತು ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ನ್ಯಾಮತಿ ತಾಲ್ಲೂಕು ಮಾದಾಪುರ ಗ್ರಾಮದ ಎಂ.ಜಿ.ಶಶಿಕಲಾ ಅವರನ್ನು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರ  ದೂರಿನ ಮೇರೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ, ಎಫ್.ಎಸ್.ಟಿ. ತಂಡದ ತೋಟಗಾರಿಕಾ ಇಲಾಖಾಧಿಕಾರಿ ಶಶಿಧರ್ ಮತ್ತು ಹೊನ್ನಾಳಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮುದ್ದುರಾಜ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಶಾಂತಲಾ ಇವರುಗಳ ತಂಡ ವಶಕ್ಕೆ ಪಡೆದಿದೆ.

error: Content is protected !!