ರೈತರ ಬೆಳೆ ಪರಿಹಾರ ಬಿಡುಗಡೆ, ಸಹಾಯಕ್ಕೆ ಸಹಾಯವಾಣಿ

ದಾವಣಗೆರೆ, ಮೇ 14- 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಂಭವಿಸಿರುತ್ತದೆ. ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದು, ರೈತರಿಗೆ ಪರಿಹಾರ ಬಾರದಿದ್ದಲ್ಲಿ ಮಾಹಿತಿ ನೀಡಲು ದಾವಣಗೆರೆ ಉಪವಿಭಾಗದ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭವಾಗಿದ್ದು, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳ ರೈತರು ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಸಂಖ್ಯೆ  08192-272955 ಗೆ ಕರೆ ಮಾಡಬಹುದು ಎಂದು ಉಪವಿಭಾಗಾಧಿಕಾರಿ ಶ್ರೀಮತಿ ಎನ್‌. ದುರ್ಗಾಶ್ರೀ ತಿಳಿಸಿದ್ದಾರೆ.

error: Content is protected !!