ಸತ್ಯನಾರಾಯಣಪುರದಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ

ದಾವಣಗೆರೆ, ಏ. 23- ಹರಿಹರ ತಾಲ್ಲೂಕು ಸತ್ಯನಾರಾಯಣಪುರ (ಕುಂದುವಾಡ ಕ್ಯಾಂಪ್)ದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಶ್ರೀರಾಮ ದೇವಸ್ಥಾನ, ಶ್ರೀ ಸೀತಾರಾಮ ಲಕ್ಷ್ಮಣ, ಹನುಮಂತ ಸಮೇತ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮಿ ವಿಗ್ರಹಗಳ ಪುನಃ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ರಾಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು.ಸತ್ಯನಾರಾಯಣ ಅವರು, ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಹೇಳಿದರು. ಧಾರ್ಮಿಕ ಕಾರ್ಯಕ್ರಮಗಳು ನಿನ್ನೆ ಆರಂಭವಾಗಿದ್ದು, ನಾಡಿದ್ದು ದಿನಾಂಕ 26ರವರೆಗೆ ನಡೆಯಲಿವೆ. ಅಲ್ಲಿಯವರೆಗೂ ಅನ್ನ ಸಂತರ್ಪಣೆ ವ್ಯವಸ್ಥೆ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಟ್ರಸ್ಟಿ ಜಿ.ಚಾಣಕ್ಯ, ಬಿ.ಭಾಸ್ಕರ್,
ಪಿ.ವಿ.ಬಿ. ಸತ್ಯನಾರಾಯಣ, ವೈಟ್ಲಾ ತಾತಾರಾವ್, ಕಣ್ಣಾಳ್ ಅಂಜಿನಪ್ಪ, ಲಿಂಗರಾಜ್ ಇತರರಿದ್ದರು.

error: Content is protected !!