ಹರಿಹರದಲ್ಲಿ ಹನುಮ ಜಯಂತಿ

ಹರಿಹರದಲ್ಲಿ ಹನುಮ ಜಯಂತಿ

ಹರಿಹರ, ಏ.23- ನಗರದ ಹೆಚ್.ಶಿವಪ್ಪ ವೃತ್ತದಲ್ಲಿರುವ ಪೇಟೆ ಆಂಜನೇ ಯಸ್ವಾಮಿ ದೇವಸ್ಥಾ ನದಲ್ಲಿ ಇಂದು ಹನುಮ ಜಯಂತಿ ನಿಮಿತ್ತವಾಗಿ ಶ್ರೀ ಆಂಜನೇ ಯಸ್ವಾಮಿ, ನವಗ್ರಹ ಸ್ವಾಮಿ ಮತ್ತು ಶನೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ತೊಟ್ಟಿಲು ಪೂಜೆ, ಪ್ರಸಾದ ವಿನಿಯೋಗ ನಂತರ ಸಂಜೆ ಆಂಜನೇಯಸ್ವಾಮಿ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಮೆರವಣಿಗೆ ಮಾಡಲಾಯಿತು.  ಈ ಸಂದರ್ಭದಲ್ಲಿ ಪೇಟೆ ಆಂಜನೇಯಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕರು ವೆಂಕಟೇಶ್, ಹಿಂದೂ ಜಾಗರಣ ವೇದಿಕೆಯ ದಿನೇಶ್, ಚಂದನ್ ಮೂರ್ಕಲ್, ಶಿವು, ಮಹೇಶ್, ಚಂದ್ರಕಾಂತ್, ಗಿರೀಶ್, ಇತರರು ಹಾಜರಿದ್ದರು. 

error: Content is protected !!