ಇಟ್ಟಿಗೆ ಟ್ರ್ಯಾಕ್ಟರ್ ಪಲ್ಟಿ: ಯುವಕ ಸಾವು

ದಾವಣಗೆರೆ, ಏ.1- ಇಟ್ಟಿಗೆ ತುಂಬಿಕೊಂಡಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಟ್ಟಿಗೆ ಮೇಲೆ ಕುಳಿತಿದ್ದ ಯುವಕ ಮೃತಪಟ್ಟ ಘಟನೆ ಮುಸ್ಸೆನಾಳು-ಕುಂಕೋವ ಮಧ್ಯ ಕಲ್ಲಡಿ ಕ್ರಾಸ್ ಬಳಿ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಯುವರಾಜ ನಾಯ್ಕ  (27) ಮೃತ ಯುವಕ. ಕೂಲಿ ಕೆಲಸ ಮಾಡುತ್ತಿದ್ದ ಈತ, ಭಾನುವಾರ ಬೆಳಿಗ್ಗೆ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್‌ ಟ್ರೈಲರ್‌ನ ಮೇಲೆ ಕುಳಿತಿದ್ದ. ಈ ವೇಳೆ ಅತಿವೇಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಯುವರಾಜ ನಾಯ್ಕ ಕೆಳಗೆ ಬಿದ್ದಿದ್ದು, ಇಟ್ಟಿಗೆಗಳು ಈತನ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.  

ಮೃತನ ಸಹೋದರ ಸುಂದರನಾಯ್ಕ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!