ನಗರದಲ್ಲಿ ಬೇಸಿಗೆ ಶಿಬಿರ

ದಾವಣಗೆರೆ, ಮಾ. 29- ಜಿಲ್ಲಾ ಶಿಶು ಕಲ್ಯಾಣ ಮಂಡಳಿ ವತಿಯಿಂದ ಏ. 1 ರಿಂದ 15 ರವರೆಗೆ ನಗರದ ವನಿತಾ ಸಮಾಜದ ಸಭಾಂಗಣದಲ್ಲಿ ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಲಾಗಿದೆ. ಕ್ವಿಲ್ಲಿಂಗ್ ಆರ್ಟ್ಸ್, ಮಡಿಕೆಯ ಮೇಲೆ ಪೇಂಟಿಂಗ್, ಸಿಮೇಂಟ್ ಆರ್ಟ್ಸ್, ಫ್ರಿಜ್ ಮ್ಯಾಗ್ನೆಟ್, ಬಟನ್ ಆರ್ಟ್ಸ್, ಕಮ್ಯುನಿಕೇಶನ್ ಸ್ಕಿಲ್ ಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಒಂದು ದಿವಸ ಹೊರ ಸಂಚಾರವನ್ನು ಸಹ ಏರ್ಪಡಿಸಲಾಗಿದೆ. 8 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸಬಹುದು.  ವಿವರಕ್ಕೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅಧ್ಯಕ್ಷರಾದ ಉಷಾ ರಂಗನಾಥ್,  (9986520989) ಸಂಪರ್ಕಿಸಬಹುದು.

error: Content is protected !!