ಚನ್ನಗಿರಿ, ಮಾ. 1- ತಾಲ್ಲೂಕಿನ ತ್ಯಾವಣಿಗೆ ಸಮೀಪದ ಹರನಹಳ್ಳಿ – ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಇದೇ ದಿನಾಂಕ 5 ರಿಂದ 10 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 5 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದಾಸೋಹದ ಅಕ್ಕಿ ರಾಶಿ ಪೂಜೆ, ರಾತ್ರಿ 10 ಕ್ಕೆ ಡೊಳ್ಳು ಕುಣಿತ, ಕೀಲು ಕುದುರೆ ಕುಣಿತ, ಭಜನೆ, ಕೋಲು ಮೇಳ, ಸಕಲ ಭಕ್ತಾದಿಗಳೊಂದಿಗೆ ವಿಜೃಂಭಣೆಯಿಂದ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಯ ಒಳಮಠದಿಂದ ಹೊರ ಮಠಕ್ಕೆ ಉತ್ಸವ ಹೊರಡುವುದು ಹಾಗೂ ಕುಂಭಾಭಿಷೇಕ ನಡೆಯಲಿದೆ .
ದಿನಾಂಕ 8 ರಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬ್ರಹ್ಮ ಮಾಲೆ ಗುರು ದೀಕ್ಷೆ, ಸಂಜೆ 5 ಗಂಟೆಗೆ ನಾಗದುಗ್ಗಳ ಕಾರ್ಯಕ್ರಮ, ಅಥಣಿ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 9 ರ ಶನಿವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಮರ್ಥ ಸದ್ಗುರು ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳ 48 ನೇ ವರ್ಷದ ಮುಳ್ಳು ಗದ್ದಿಗೆ ಉತ್ಸವ, ಉಚಿತ ಸಾಮೂಹಿಕ ವಿವಾಹ, ಜವಳ, ಸಂಜೆ 7 ಗಂಟೆಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರಲಿವೆ. ಅಂದಿನ ಕಾರ್ಯಕ್ರಮವನ್ನು ಮಾಜಿ ಲೋಕಸಭಾ ಸದಸ್ಯ ವಿ ಎಸ್ ಉಗ್ರಪ್ಪ ಉದ್ಘಾಟಿಸುವರು.
ದಿನಾಂಕ 10 ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಶ್ರೀಗಳ ಆಶೀರ್ವಚನ, 9 ಗಂಟೆಗೆ ಅಮಾವಾಸ್ಯೆ ಪ್ರಯುಕ್ತ ಅಗ್ನಿಹೋಮ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9606297544 ಅಥವಾ 9845409510.