ನಗರದಲ್ಲಿ ಇಂದು ಬಿ.ಟಿ. ಜಾಹ್ನವಿ ಅವರ ಹೊಸ ಕಥಾ ಸಂಕಲನ ಬಿಡುಗಡೆ

ಕತೆಗಾರ್ತಿ ಶ್ರೀಮತಿ ಬಿ.ಟಿ. ಜಾಹ್ನವಿ ಅವರ ಹೊಸ ಕಥಾ ಸಂಕಲನ ‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ ಸಮಾರಂಭವು ಇಂದು ಬೆಳಿಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.

ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ಪುಸ್ತಕ ಬಿಡುಗಡೆ ಮಾಡಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ವಹಿಸಲಿದ್ದು, ಲೇಖಕ ಡಾ. ರವಿಕುಮಾರ ನೀಹ, ಲೇಖಕಿ ವಿಮರ್ಶಕಿ ಸೌಮ್ಯ ಕೋಡೂರು, ಸಾಹಿತಿ ಡಾ. ಮಮತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿ.ಟಿ. ಜಾಹ್ನವಿಯವರ ಕಥೆಯನ್ನು ಆಧರಿಸಿದ `ದೂಪ್ಪಳ್ಳಿ ಸೆಕ್ಸಿ ದುರುಗ’ ರಂಗ ಪ್ರಸ್ತುತಿಯನ್ನು ಹೆಗ್ಗೋಡಿನ ಕೆ.ವಿ ಅಕ್ಷರ ಅವರ ಮಾರ್ಗದರ್ಶನದಲ್ಲಿ ಕಲಾವಿದರಾದ ವಿದ್ಯಾ ಅಕ್ಷರ ಮತ್ತು ವಾಣಿ ಸತೀಶ್ ಅವರು ನಡೆಸಿಕೊಡಲಿದ್ದಾರೆ.

error: Content is protected !!