ನಗರದಲ್ಲಿ ಇಂದು ಶಿವಗೋಷ್ಠಿ

ಶಿವಗೋಷ್ಠಿ ಸಮಿತಿ, ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ, ಸಾದರ ನೌಕರರ ಬಳಗದ ಸಹಯೋಗದಲ್ಲಿ  ಇಂದು ಸಂಜೆ 6.30 ಕ್ಕೆ   ತರಳಬಾಳು ಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದ ಆವರಣದಲ್ಲಿ `ಶಿವಗೋಷ್ಠಿ-302 ಹಾಗೂ ಸ್ಮರಣೆ-  76 ‘ ಮಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು. `ಮಹಾ ಮಾನವತಾವಾದಿ ಬಸವಣ್ಣನವರು’ ಕುರಿತು ಮುಖ್ಯೋಪಾಧ್ಯಾಯ ದಾಗಿನಕಟ್ಟೆ ಪರಮೇಶ್ವರಪ್ಪ ಉಪನ್ಯಾಸ ನೀಡಲಿದ್ದಾರೆ.

ಕೂಲಂಬಿಯ ನಿವೃತ್ತ ಮುಖ್ಯಶಿಕ್ಷಕ ಲಿಂ. ಎಸ್.ಎಂ. ಶಿವಾನಂದಯ್ಯ ಅವರ ಸ್ಮರಣೆಯನ್ನು  ಹೂವಿನಮಡು ಬ್ಯಾಂಕ್ ನಿವೃತ್ತ ಅಧಿಕಾರಿ ಹೆಚ್.ಬಿ. ಜಯಪ್ಪ ಮಾಡಲಿದ್ದಾರೆ. ಕದಳಿ ಮಹಿಳಾ ವೇದಿಕೆಯ ಸದಸ್ಯರಿಂದ ವಚನ ಗಾಯನ ನಡೆಯಲಿದೆ. 

error: Content is protected !!