ಹೊಸನಾಯಕನಹಳ್ಳಿ ಚಂದ್ರಗಿರಿ ಮಠದಲ್ಲಿ ಇಂದಿನಿಂದ ಸಪ್ತಾಹ

ದಾವಣಗೆರೆ ತಾಲ್ಲೂಕು ಹದಡಿ-ಹೊಸನಾಯ್ಕನಹಳ್ಳಿ ಚಂದ್ರಗಿರಿ ಮಠದಲ್ಲಿ 69 ನೇ ವರ್ಷದ ಸಪ್ತಾಹ, ಪುಣ್ಯಾರಾಧನೆ, ರಥೋತ್ಸವ ಕಾರ್ಯಕ್ರಮಗಳು ಇಂದಿನಿಂದ ಇದೇ ದಿನಾಂಕ 16ರವರೆಗೆ ಜರುಗಲಿವೆ.

ಶ್ರೀಮಠದ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿ ದಿನ ಭಜನೆ, ಪೂಜಾ ವಿಧಿ-ವಿಧಾನ, ಭಗವದ್ಗೀತಾ ಪಾರಾಯಣ, ಮಠಾಧೀಶರಿಂದ ಪ್ರವಚನ, ಗಣ್ಯರಿಗೆ ಸನ್ಮಾನ ಜರುಗಲಿದೆ.

ಇದೇ ದಿನಾಂಕ 16 ರಂದು ಬೆಳಿಗ್ಗೆ ಬ್ರಹ್ಮಲೀನ ಶ್ರೀ ವಿದ್ಯಾವರೇಣ್ಯ ಯೋಗೀಶ್ವರರ 19 ನೇ ವರ್ಷದ ಪುಣ್ಯರಾಧನಾ ಮಹೋತ್ಸವ, ನೂತನ ಶ್ರೀಗಳ 20 ನೇ ವರ್ಷದ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಅಂದು ಮಧ್ಯಾಹ್ನ 12.30 ಕ್ಕೆ ಸರಳ ಸಾಮೂಹಿಕ ವಿವಾಹ, ಸಂಜೆ 4.30 ಕ್ಕೆ ಸದ್ಗುರಗಳ ರಥೋತ್ಸವ ಜರುಗಲಿದೆ. 

error: Content is protected !!