ಎಲೆಬೇತೂರು ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನೆ, ಪ್ರತಿಷ್ಠಾಪನೆ

ಎಲೆಬೇತೂರು ಗ್ರಾಮದಲ್ಲಿ  ದೇವಸ್ಥಾನದ ಉದ್ಘಾಟನೆ, ಪ್ರತಿಷ್ಠಾಪನೆ

ದಾವಣಗೆರೆ, ಫೆ. 9 – ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮ ದಲ್ಲಿ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇದೇ ದಿನಾಂಕ 12 ಮತ್ತು 13ರಂದು ಹಮ್ಮಿಕೊಳ್ಳಲಾಗಿದೆ.

ದಿನಾಂಕ 12 ರ ಸೋಮವಾರ ಬೆಳಿಗ್ಗೆ ಶ್ರೀ ಮಾರಿಕಾಂಬಾ ದೇವಿಯನ್ನು ಮೆರವಣಿಗೆ ಮೂಲಕ ಬಾಜಾ ಭಜಂತ್ರಿಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಗುವುದು. ಸಂಜೆ 6 ಗಂಟೆಗೆ ದೇವತೆಗೆ ಅದಿವಾಸ ಪೂಜೆ ಹಾಗೂ ವಾಸ್ತು ಮತ್ತು ದೇವತಾ ಪ್ರತಿಷ್ಠಾಂಗ ಹೋಮ ಜರುಗುವುದು. ದಿನಾಂಕ 13ರ ಮಂಗಳವಾರ ಬೆಳಿಗ್ಗೆ ದೇವಸ್ಥಾನ ಉದ್ಘಾಟನೆ, ದೇವಿಯ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ಕಳಸಾರೋಹಣ ಕಾರ್ಯಕ್ರಮ ಜರುಗುವುದು. ನಂತರ ಪ್ರಸಾದ ವಿತರಣೆ ನಡೆಯಲಿದೆ.

error: Content is protected !!