ನಗರದಲ್ಲಿಂದು ಶಿವಾನುಭವ ಸಂಪದ

ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಇಂದು ಸಂಜೆ 6.30 ಕ್ಕೆ 265ನೇ ಶಿವಾನುಭವ ಸಂಪದ ನಡೆಯಲಿದೆ. ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ (ಹಾಲಕೆರೆ) ಸಾನ್ನಿಧ್ಯ ವಹಿಸುವರು.
ಡಾ. ವೀರೇಶ್‌ ಬಿರಾದಾರ್‌ ಉಪನ್ಯಾಸ ನೀಡುವರು. ಲಿಂ. ಶ್ರೀಮತಿ ರುದ್ರಮ್ಮ ಲಿಂ. ಎನ್‌.ಎ. ಗುಂಡಪ್ಪ ಇವರುಗಳ ಸ್ಮರಣಾರ್ಥ ಶ್ರೀಮತಿ ಸುಮಂಗಲಮ್ಮ ಎನ್‌.ಜಿ. ಅಮರೇಶ್‌ ಮತ್ತು ಮಕ್ಕಳು, ಶ್ರೀಮತಿ ಎನ್‌.ಪಿ. ರೇಖಾ ಎನ್‌.ಜಿ. ಪ್ರಕಾಶ್‌ ಮತ್ತು ಮಕ್ಕಳ ಭಕ್ತಿ ಸೇವೆ ನಡೆಯುವುದು.

error: Content is protected !!