ಹಳೇಕಡ್ಲೇಬಾಳು : ಸ.ಉ.ಶಾಲೆಯಲ್ಲಿ ಇಂದು ಚಿಗುರು ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಹಳೇಕಡ್ಲೇಬಾಳು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಡ್ಲೇಬಾಳು ಗ್ರಾ.ಪಂ ಉಪಾಧ್ಯಕ್ಷ ಎ.ಬಿ.ಪ್ರಭಾಕರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಗ್ರಾ.ಪಂ ಅಧ್ಯಕ್ಷರಾದ ಅಕ್ಕಮ್ಮ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಎಸ್.ಎಸ್.ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಶೇಷ ಆಹ್ವಾನಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಸದಸ್ಯರಾದ ಹೆಚ್.ರಾಮಪ್ಪ, ಎಲ್.ಹೆಚ್.ಪರಮೇಶ್ವರಪ್ಪ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಹಾಲಮ್ಮ ಬಸವರಾಜ, ಮುಖ್ಯೋಪಾಧ್ಯಾಯರಾದ ಐ.ಕೆ.ಜ್ಯೋತಿ ಭಾಗವಹಿಸುವರು.

error: Content is protected !!