ದಾವಣಗೆರೆ, ನ. 19- ತಾಲ್ಲೂಕಿನ ಕಡ್ಲೇಬಾಳು ಗ್ರಾಮದಲ್ಲಿರುವ ಶ್ರೀ ನಾಗಸುಬ್ರಹ್ಮಣೇಶ್ವರ ಸ್ವಾಮಿ ದೇವಾಲಯದಲ್ಲಿ ದಿನಾಂಕ 24ನೇ ಶುಕ್ರವಾರದಿಂದ ದಿನಾಂಕ 30ರ ಗುರುವಾರದವರೆಗೆ ಶ್ರೀ ನಾಗಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚತುರ್ವೇದಪಾರಾಯಣ ಋಗ್ವೇದ ಸಂಹಿತ ಮಹಾಯಾಗ ಮತ್ತು ಶ್ರೀಮದ್ ಭಾಗವತ ಪಾರಾಯಣ ನಡೆಯಲಿದೆ.
ಶ್ರೀ ಸದ್ಗುರು ಕೃಪಾ ಭವನದ ದೇವರಹಟ್ಟಿಯ ಶ್ರೀ ಕ್ಷೇತ್ರ ಸ್ವರ್ಣವಲ್ಲಿ ಸೇವಾ ಮಹಾ ಸಂಸ್ಥಾನದಿಂದ ಪ್ರಧಾನ ಆಚಾರ್ಯ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕಡ್ಲೇಬಾಳು ಶ್ರೀ ನಾಗಸುಬ್ರಹ್ಮಣೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪಾದ ದೇಶಪಾಂಡೆ ಅವರು ತಿಳಿಸಿದ್ದಾರೆ.