ಕರುಣಾದಿಂದ ಸೈಕಲ್ ವಿತರಣೆ

ದಾವಣಗೆರೆ, ಸೆ.21- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಅತ್ಯಂತ ಕಡು ಬಡವರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ  ಸೈಕಲ್ ಗಳನ್ನು ವಿತರಿಸಲಾಗುತ್ತಿದೆ. ಸೈಕಲ್‌ನ ಅವಶ್ಯಕತೆ ಇರುವ ಫಲಾನುಭವಿಗಳು ಸಂಪರ್ಕಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ 200 ಸೈಕಲ್‌ಗಳನ್ನು ವಿತರಿಸುವ ಗುರಿ ಹೊಂದಿದ್ದು, ಸಹೃದಯಿ ದಾನಿಗಳು ಹೊಸ ಸೈಕಲ್‌ಗೆ 7 ಸಾವಿರ ರೂ. ಮತ್ತು ಹಳೆಯ ಸೈಕಲ್‌ಗೆ 3 ಸಾವಿರ ರೂ. ಧನ ಸಹಾಯ ಮಾಡಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಅಲ್ಲದೇ ತಮ್ಮಲ್ಲಿ ಉಪಯೋಗಿಸದೇ ಹಾಗೆಯೇ ಉಳಿದಿರುವ ಹಳೆಯ ಸೈಕಲ್‌ಗಳನ್ನು ದಾನ ಮಾಡುವ ಮೂಲಕ ಬಡವರ ಜೀವನ ನಿರ್ವಹಣೆಗೆ ಸಹಕರಿಸಲು ಕೋರಲಾಗಿದೆ. ವಿವರಕ್ಕೆ ಸಂಪರ್ಕಿಸಿ. 9538024422.ಆದೇಶ ನೀಡಿದರು.

error: Content is protected !!