ಗುತ್ತಿದುರ್ಗದ ಸಿದ್ಧಜ್ಜ ನಿಧನಕ್ಕೆ ಪಂಡಿತಾರಾಧ್ಯ ಶ್ರೀ ಸಂತಾಪ

ದಾವಣಗೆರೆ, ಸೆ. 21- ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದ ಹಿರಿಯ ಜೀವಿ ಸಿದ್ಧಜ್ಜನವರ ನಿಧನಕ್ಕೆ ಸಾಣೇಹಳ್ಳಿಯ ಡಾ. ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿದ್ಧಪ್ಪಜ್ಜ ಶ್ರೀಮಠದ ನಿಷ್ಠಾವಂತ ಭಕ್ತರಾಗಿದ್ದರು. ಸತ್ಕಾರ್ಯಗಳಿಗೆ  ಆರ್ಥಿಕ ನೆರವು ನೀಡುತ್ತಿದ್ದರು. ತರಳಬಾಳು ಹುಣ್ಣಿಮೆ, ಶ್ರದ್ಧಾಂಜಲಿ, ನಾಟಕೋತ್ಸವ ಕಾರ್ಯಕ್ರಮಗಳಿಗೆ ಎಂತಹ ಸಂದ ರ್ಭದಲ್ಲೂ ತಪ್ಪಿಸಿಕೊಂಡಿಲ್ಲ ಎಂದರು. ನಿಷ್ಠೂರವಾಗಿ ಮಾತನಾಡುವ ಗುಣವೂ ಇತ್ತು. ಅಂಥವರ ಅಗಲುವಿಕೆ ಹಲವು ಮೌಲ್ಯಗಳ ಅಗಲುವಿಕೆಯೇ ಸರಿ. ಅವರ ಆದರ್ಶ ಗುಣಗಳು ಮಕ್ಕಳು, ಬಂಧುಗಳು ಮುಂದುವರೆಸಿಕೊಂಡು ಹೋಗಬೇಕೆಂದು ಪಂಡಿತಾರಾಧ್ಯ ಶ್ರೀಗಳು ಕರೆ ನೀಡಿದರು.

error: Content is protected !!