ದಾವಣಗೆರೆ, ಸೆ.21- ನಗರದ ಹಿಂದೂ ಮಹಾಗಣಪತಿ ಟ್ರಸ್ಟ್ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 24 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸ್ಥಳದಲ್ಲೇ ಶ್ರೀ ಗಣಪತಿ ಚಿತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದ್ದಾರೆ.
ಯಾವುದೇ ವಯೋಮಾನದ ಮಿತಿ ಇಲ್ಲ. ಸ್ಪರ್ಧಿಗಳಿಗೆ ಉಚಿತವಾಗಿ ಹಾಳೆ (ಡ್ರಾಯಿಂಗ್ ಶೀಟ್) ವಿತರಿಸುತ್ತಿದ್ದು, ಇನ್ನುಳಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಒಂದು ಗಂಟೆಯ ಕಾಲಾವಕಾಶವಿದ್ದು ಯಾವುದೇ ಪ್ರಕಾರದ ಪರಿಕಲ್ಪನೆಗಳಲ್ಲಿ ಶ್ರೀ ಗಣಪತಿ ಚಿತ್ರ ಬರೆಯಬಹುದು. ಸ್ಪರ್ಧಿಗಳು ಅಂದು ಬೆಳಿಗ್ಗೆ 9.30ಕ್ಕೆ ಬಂದು ಸ್ಥಳದಲ್ಲೇ ಹೆಸರು ನೋಂದಾಯಿಸಬೇಕು. ಸ್ಪರ್ಧೆಯ ನಂತರ ತೀರ್ಪುಗಾರರು ತೀರ್ಪು ಕೊಟ್ಟ ಮೇಲೆ ಸ್ಥಳದಲ್ಲೇ ಬಹುಮಾನ, ಅಭಿನಂದನಾ ಪತ್ರ ವಿತರಿಸಲಾಗುವುದು. ಮಾಹಿತಿಗೆ 9538732777 ಕ್ಕೆ ಸಂಪರ್ಕಿಸಬಹುದು.