ದೊಡ್ಡಪೇಟೆಯಲ್ಲಿ ಇಂದು ಸುಗಮ ಸಂಗೀತ

 ದೊಡ್ಡಪೇಟೆಯಲ್ಲಿರುವ ಶ್ರೀ ವಿನಾಯಕ ದೇವಸ್ಥಾನ ಸೇವಾ ಸಂಘ ಟ್ರಸ್ಟ್‌ ಆಶ್ರಯದಲ್ಲಿ ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿನಾಯಕ ಮಹೋತ್ಸವ ನಡೆಯುತ್ತಿದೆ. 

ಇಂದು ಸಂಜೆ 6 ಗಂಟೆಗೆ ವಿದ್ಯುತ್‌ ದೀಪಗಳಿಂದ ಅಲಂಕೃತವಾದ ಮಯೂರ ರಥದಲ್ಲಿ ಶ್ರೀ ಸ್ವಾಮಿಯ ಉತ್ಸವವನ್ನು ಮಂಗಲವಾದ್ಯದೊಡನೆ ನಗರದ ಮುಖ್ಯ ಬೀದಿಗಳಲ್ಲಿ ಕೊಂಡೊಯ್ದು ಶ್ರೀ ಸ್ವಾಮಿಯನ್ನು ಹೊಂಡದಲ್ಲಿ ವಿಸರ್ಜಿಸಲಾಗುವುದು.

ನಾಳೆ ಶನಿವಾರ ಮಧ್ಯಾಹ್ನ 12.30 ರಿಂದ ದಾಸೋಹ ನಡೆಯುವುದು. 

error: Content is protected !!