ಭದ್ರಾ ನೀರು ನಿಲುಗಡೆ ರೈತರಿಗೆ ವಂಚನೆ

ದಾವಣಗೆರೆ, ಸೆ. 15 – ನಾಳೆ ಶನಿವಾರದಿಂದ ಹತ್ತು ದಿನಗಳ ಕಾಲ ಭದ್ರಾ ನೀರು ಹರಿಸುವುದನ್ನು ನಿಲ್ಲಿಸಲು ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿರುವ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಶಾಮನೂರು, ಇದು ಅಚ್ಚುಕಟ್ಟು ವ್ಯಾಪ್ತಿಯ ಶೇ.70ರಷ್ಟು ರೈತರನ್ನು ವಂಚಿಸಿದಂತೆ ಎಂದು ಹೇಳಿದ್ದಾರೆ.

ಕಳೆದ ಸೆ.6ರಂದು ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನದಂತೆ ನೀರು ಹರಿಸುವುದನ್ನು ನಿಲ್ಲಿಸುವುದಾಗಿ ಕರ್ನಾಟಕ ನೀರಾವರಿ ನಿಗಮ ಆದೇಶ ಹೊರಡಿಸಿದೆ. ಆದರೆ, ಅಂದಿನ ಸಭೆಯಲ್ಲಿ ದಾವಣಗೆರೆ ಭಾಗದ ಜನಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಲಾಗಿತ್ತು ಎಂದು ಲಿಂಗರಾಜ್ ತಿಳಿಸಿದ್ದಾರೆ. ಕೇವಲ ಶೇ.10ರಷ್ಟಿರುವ ಜನರ ಮಾತು ಕೇಳಿ ಈ ನಿರ್ಧಾರ ತೆಗೆದುಕೊಂಡಿರುವುದು ಘೋರ ಅಪರಾಧ. ಈ ನಿರ್ಧಾರದ ವಿರುದ್ಧ ಹೋರಾಟ ನಡೆಸಲಾಗುವುದು. ಮುಂದೆ ಆಗುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.

error: Content is protected !!