ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ ಹೃದಯ ರೋಗ, ನರರೋಗ, ಕೀಲು ಮೂಳೆ ಮತ್ತು ಚರ್ಮರೋಗ, ಕಿಡ್ನಿ ಸ್ಟೋನ್, ಬಿಪಿ., ಸಕ್ಕರೆ ಕಾಯಿಲೆ, ಇಸಿಜಿ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರದ ನೇತೃತ್ವವನ್ನು ಹಿರಿಯ ವೈದ್ಯ ಡಾ. ಟಿ.ಜಿ. ರವಿಕುಮಾರ್ ವಹಿಸಲಿದ್ದಾರೆ. ಪುರಸಭೆ ಸದಸ್ಯರಾದ ಬಿ. ಮಂಜುನಾಥ, ರೇವಣಸಿದ್ದೇಶ ಹಾಗೂ ಸರ್ವ ಸದಸ್ಯರ, ಗ್ರಾಮಸ್ಥರು ಶಿಬಿರಕ್ಕೆ ಸಹಕಾರ ನೀಡುವರು. ವಿವರಕ್ಕೆ ಸಂಪರ್ಕಿಸಿ : 91644 65550.
September 9, 2024