ನಗರದಲ್ಲಿ ನಾಳೆ ಉಚಿತ ನೇತ್ರ ತಪಾಸಣೆ, ಕನ್ನಡಕಗಳ ವಿತರಣೆ ಕಾರ್ಯಕ್ರಮ

ದಾವಣಗೆರೆ, ಸೆ.4- ನಗರದ ಶ್ರೀ ಅಕ್ಕಮಹಾದೇವಿ ಸಮಾಜ, ನೇತ್ರದಾನ ಪ್ರೇರಣಾ ಸಮಿತಿ ವತಿಯಿಂದ ನಾಡಿದ್ದು ದಿನಾಂಕ 6 ರಂದು ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ.

40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಕನ್ನಡಕಗಳನ್ನು ಇದೇ ದಿನಾಂಕ 8 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಕೆ.ಕೆ. ಸುಶೀಲಮ್ಮ, ಕಾರ್ಯದರ್ಶಿ ಸುವರ್ಣ ದೊಗ್ಗಳ್ಳಿ ತಿಳಿಸಿದ್ದಾರೆ. ಮಾಹಿತಿಗಾಗಿ ವಿಜಯ ಬಸವರಾಜ್ (9980199910), ನೀಲಗುಂದ ಜಯಮ್ಮ (9620762682), ಮಂಜುಳ ಕಾಯಿ (918553139731) ಗೆ ಸಂಪರ್ಕಿಸಬಹುದು.

error: Content is protected !!