ಪರಿಸರ ಹಾನಿಗೆ ಮನುಷ್ಯನೇ ಕಾರಣ : ಶಾಸಕ ಹರೀಶ್

ಪರಿಸರ ಹಾನಿಗೆ ಮನುಷ್ಯನೇ ಕಾರಣ : ಶಾಸಕ ಹರೀಶ್ - Janathavaniಮಲೇಬೆನ್ನೂರು, ಜೂ. 5 – ಪರಿಸರ ಹಾನಿಗೆ ಮನುಷ್ಯನೇ ಕಾರಣ. ಸರಿಪಡಿಸುವ ಹೊಣೆ ಕೂಡ ಅವನಿಗೆ ಸೇರಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಟ್ಟರು.

ಪಟ್ಟಣದ ಪುರಸಭೆ  ಹಾಗೂ ನಾಡ ಕಛೇರಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದರು. ಈಗಾಗಲೇ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದ್ದು, ಮುಂದೆ ಹಾನಿಯಾಗದಂತೆ ಜಾಗ್ರತೆ ವಹಿಸುವ ಅನಿವಾರ್ಯತೆ ಎದುರಾಗಿದೆ. ಪರಿಸರ ಹಾನಿಯಿಂದಾಗಿ ಕಾಲ ಬದಲಾವಣೆ ಆಗಿದ್ದು ಮಳೆಗಾಲ, ಬೇಸಿಗೆ ಕಾಲ ತಮ್ಮ ವರ್ತನೆ ಬದಲಿಸಿವೆ. ನಗರೀಕರಣ, ಕಾಡು ಕಡಿಯುವಿಕೆ, ಕೈಗಾರಿಕೆಗಳ ಕಲುಷಿತ ತ್ಯಾಜ್ಯ ಹೊರಸೂಸುವಿಕೆ ತಡೆಯಬೇಕಿದೆ. ಗಿಡ-ಮರ ಬೆಳೆಸಿ ಪೋಷಿಸಿ ಹೆಚ್ಚಿರುವ ಉಷ್ಣಾಂಶ ಕಡಿಮೆ ಮಾಡಬೇಕಿದೆ ಎಂದರು.

ಪಟ್ಟಣದ ಸೌಂದರ್ಯ ಹೆಚ್ಚಲು ಪ್ರತಿಯೊಂದು ಮನೆಗೆ ಇದೇ ವಾರದಲ್ಲಿ ಸಸಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. 

ಉಪತಹಶೀಲ್ದಾರ್ ಆರ್. ರವಿ ಮಾತನಾಡಿ, ಪರಿಸರ ಸಂರಕ್ಷಣೆ ನಾಗರಿಕ ಕರ್ತವ್ಯ, ಪ್ಲಾಸ್ಟಿಕ್, ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆ ಕಡಿಮೆ ಮಾಡಲು ಕೋರಿದರು.

ಪಟ್ಟಣದ ಆಶ್ರಯ ಕಾಲೋನಿಯಲ್ಲಿ  ಪುರಸಭೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ , ಜಾಗೃತಿ ಜಾಥಾ, ಮನೆ ಮನೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಪರಿಸರ ಎಂಜಿನಿಯರ್ ಉಮೇಶ್, ಕಂದಾಯಾಧಿಕಾರಿ ಪ್ರಭು, ಹಿರಿಯ ಆರೋಗ್ಯ ನಿರೀಕ್ಷಕ ನವೀನ್, ಶಿವರಾಜ್, ಜೆ.ಇ. ಮಂಜುನಾಥ್ ,ಜೆಇ ಹಾಲೇಶಪ್ಪ, ಪುರಸಭೆ ಸದಸ್ಯರು, ಸಿಬ್ಬಂದಿ ಇದ್ದರು. ಸಮುದಾಯ ಸಂಘಟನಾ ಅಧಿಕಾರಿ ನಿಟುವಳ್ಳಿ ದಿನಕರ್ ಸ್ವಾಗತಿಸಿ, ವಂದಿಸಿದರು.

error: Content is protected !!