ಹರಿಹರ, ಜೂ. 5 – ನಗರದ ಶಿಬಾರ ಬಡಾವಣೆಯ ಹತ್ತಿರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿರುವ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಚೂರಿ ನೀಲಪ್ಪನವರ ಕಣಕ್ಕೆ ಟ್ರ್ಯಾಕ್ಟರ್‌ನಲ್ಲಿ ಭತ್ತದ ಹುಲ್ಲನ್ನು ಸಾಗಿಸುವಾಗ ವಿದ್ಯುತ್ ಕಂಬಕ್ಕೆ ಹುಲ್ಲು ತಗುಲಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸೋಮಶೇಖರ್, ಶೇಖರ್, ಕುಮಾರ್ ಉಪಸ್ಥಿತರಿದ್ದರು.
December 7, 2023