ನಾಳೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ನಾಳೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ - Janathavaniಚಿಕ್ಕಮಗಳೂರು, ಜೂ. 5 –  ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ನಾಡಿದ್ದು ದಿನಾಂಕ  7 ರ ಬುಧವಾರ ನಗರದಲ್ಲಿ  ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಭಕ್ತಿ ಭಂಡಾರಿ ಶ್ರೀ ಬಸವೇಶ್ವರರ ಜಯಂತಿ ಮಹೋತ್ಸವ ಆಯೋಜಿಸಲಾಗಿದೆ.

ಬುಧವಾರ ಪೂರ್ವಾಹ್ನ 11.30ಕ್ಕೆ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಡೆಯುವ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸುವ ಬಾಳೆಹೊನ್ನೂರು ಶ್ರೀ ರಂಭಾಪುರಿ  ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡುವರು.

ಲೋಕ ಕಲ್ಯಾಣಾರ್ಥವಾಗಿ ಅಂದು ಬೆಳಿಗ್ಗೆ 8 ರಿಂದ ಜಗದ್ಗುರುಗಳವರ ಇಷ್ಟ ಲಿಂಗ ಮಹಾಪೂಜೆ, ಅಷ್ಟೋತ್ತರ ಮಹಾಮಂಗಲ, ಪಾದಪೂಜೆ ಏರ್ಪಡಿಸಲಾಗಿದೆ. 

error: Content is protected !!