ದಾವಣಗೆರೆ, ಜೂ. 4- ಕೇಂದ್ರದ ಸಚಿವ ಎ. ನಾರಾಯಣಸ್ವಾಮಿ ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಹೇಳಿಕೆ ನೀಡಿ ರಾಜ್ಯದ ಕೆಲವು ಕೆಂಪು ಬಸ್ಸುಗಳನ್ನು ಡಕೋಟಾ ಬಸ್ಸುಗಳೆಂದು ಟೀಕಿಸಿದ್ದಾರೆ. ರಾಜ್ಯದ ಶೇ. 94 ರಷ್ಟು ಜನ ಕೆಂಪು ಬಸ್ಸುಗಳನ್ನೇ ಅವಲಂಬಿಸಿ ಪ್ರಯಾಣ ಮಾಡುತ್ತಿದ್ದಾರೆ. ಅವರ ಹೇಳಿಕೆ ರಾಜ್ಯದ ಪ್ರಯಾಣಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಹೇಳಿದ್ದಾರೆ.
ದೇಶದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಹೊಂದಿದೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿ ಸುವ ಬರದಲ್ಲಿ ಕೆಂಪು ಬಸ್ಸು ಗಳನ್ನು ಡಕೋಟಾ ಎಂದಿರು ವುದು ಖಂಡನೀಯ. ರಾಜ್ಯದ ಕೆಂಪು ಬಸ್ಸುಗಳು ಡಕೋಟಾ ಅಲ್ಲ. ಬದಲಾಗಿ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯವರೇ ಡಕೋಟ ಮಂತ್ರಿ ಎಂದು ಬಸವರಾಜ್ ವ್ಯಂಗ್ಯವಾಡಿದ್ದಾರೆ.