`ಮನೆಗೆರಡು ಮರ- ದಾವಣಗೆರೆಗೆ ವರ’ ಮರ ಬೆಳೆಸಲು ಪ್ರೋತ್ಸಾಹ

ದಾವಣಗೆರೆ, ಜೂ. 4- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ `ಮನೆಗೆರಡು ಮರ- ದಾವಣಗೆರೆಗೆ ವರ’ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರತಿ ಮನೆ ಮುಂದೆ ಮರ ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮನೆಗೆರಡು ಮರ ಬೆಳೆಸಬೇಕೆಂದು ಮಹಾನಗರ ಪಾಲಿಕೆಯಿಂದ ಸಾರ್ವಜನಿಕರಿಗೆ ಸುತ್ತೋಲೆ ಹೊರಡಿಸಬೇಕು. ಸಸಿ ನೆಡುವಾಗ ಸಂಘ-ಸಂಸ್ಥೆಗಳೊಂದಿಗೆ ಪಾಲಿಕೆಯವರು ಮಾನವ ಸಂಪನ್ಮೂಲ ಒದಗಿಸಬೇಕು. ಜಿಲ್ಲಾಡಳಿತದ ಅಧೀನದ ಎಲ್ಲಾ ಶಾಖೆಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮನೆ ಕಟ್ಟಲು ಪರವಾನಿಗೆ ನೀಡುವಾಗ ಮಹಾನಗರ ಪಾಲಿಕೆ ಮನೆಗೆರಡು ಮರ ಬೆಳೆಸಲು ಸೂಚಿಸಲಾಗುತ್ತದೆ. ಆದರೆ ಪರವಾನಗಿ ಕೊಟ್ಟ ಬಳಿಕ ಅವರಿ ಸಸಿ ನೆಟ್ಟಿದ್ದಾರೋ ಇಲ್ಲವೋ ಎಂಬುದನ್ನು ಪಾಲಿಕೆಯವರು ಪರಿಶೀಲಿಸಬೇಕು. 

ಮನೆ ಮುಂದೆ ಸಸಿ ನೆಡಬೇಕಾದರೆ ಯಾವ ಸಸಿ ಇಷ್ಟ ಎಂಬುದನ್ನು ಅರಿತು ಸಸಿ ವಿತರಿಸಿದರೆ ಅವರು ಅದನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸುತ್ತಾರೆಂದರು.

ವಿವರಕ್ಕೆ ಲಿಂಗರಾಜ್ (9538024422 ಅಥವಾ 6363151534) ಅವರನ್ನು ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಎ.ಎಂ. ಕೊಟ್ರೇಶ್, ಡಾ.ಶಶಿಧರ್ ತವಣೆ, ಟಿ. ವಸಂತ್  ಉಪಸ್ಥಿತರಿದ್ದರು. 

error: Content is protected !!