ಹರಿಹರ ತಾಲ್ಲೂಕಿನಲ್ಲಿ ಶೇ.58ರಷ್ಟು ಮಳೆ ಕೊರತೆ, ಬಿತ್ತನೆ ಕಾರ್ಯಕ್ಕೆ ಹಿನ್ನಡೆ

ಹರಿಹರ ತಾಲ್ಲೂಕಿನಲ್ಲಿ ಶೇ.58ರಷ್ಟು ಮಳೆ ಕೊರತೆ, ಬಿತ್ತನೆ ಕಾರ್ಯಕ್ಕೆ ಹಿನ್ನಡೆ - Janathavaniಹರಿಹರ, ಜು. 1- ತಾಲ್ಲೂಕಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗದೇ ಇರುವುದರಿಂದ ರೈತರು ಬಿತ್ತನೆ ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರನಗೌಡ್ರು ತಿಳಿಸಿದರು.

ಕಚೇರಿಯ ಆವರಣದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿಲ್ಲ. ಹರಿಹರ ತಾಲ್ಲೂಕಿಗೆ ಮೇ ಅಂತ್ಯಕ್ಕೆ ವಾಡಿಕೆ ಮಳೆ 116.7 ಮಿ.ಮೀ. ಆಗಿದೆ. ಆದರೆ, ವಾಸ್ತವಿಕವಾಗಿ 49.2 ಮಿ.ಮೀ. ಮಳೆ ಬಂದಿದೆ. ಶೇ.58ರಷ್ಟು ಮಳೆಯ ಕೊರತೆಯಾಗಿದೆ ಎಂದು ಹೇಳಿದರು.

ಈಗಾಗಲೇ ಇಲಾಖೆಯ ವತಿಯಿಂದ ರೈತರಿಗೆ ಬೇಕಾಗುವ ಬಿತ್ತನೆ ಬೀಜಗಳು ರಸಗೊಬ್ಬರ, ಕೀಟನಾಶಕ ಗಳ ವಿತರಣೆ ಮಾಡುವುದಕ್ಕೆ ದಾಸ್ತಾನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು. ನಗರದ ಬೀಜ, ಔಷಧಿ, ಗೊಬ್ಬರ ಅಂಗಡಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್‌ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಹಸಿ ಮಳೆ ಆದ ತಕ್ಷಣವೇ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದರು.

ತಾಲ್ಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ 16 ಸಾವಿರದ 800 ಹೆಕ್ಟೇರ್ ಭತ್ತದ ನಾಟಿಯನ್ನು ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 4 ಸಾವಿರ ಹೆಕ್ಟೇರ್ ಭತ್ತದ ಕಟಾವು ಮಾಡಲಾಗಿದೆ. ಉಳಿದಂತೆ ಭತ್ತದ ಕಟಾವು ಕಾರ್ಯ ನಡೆಯುತ್ತಿದ್ದು. ಮಳೆ ಬೀಳುವ ಸಾಧ್ಯತೆ ಕೂಡ ಇದ್ದು, ಮುಂದೆ ದೊಡ್ಡ ಪ್ರಮಾಣದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಆದಷ್ಟು ಬೇಗ ಭತ್ತದ ಕಟಾವು ಕಾರ್ಯವನ್ನು ಮುಗಿಸಿಕೊಳ್ಳುವಂತೆ ರೈತರಿಗೆ ತಿಳಿಸಲಾಗಿದೆ ಎಂದು ಕೃಷಿ ಅಧಿಕಾರಿ ನಾಗನಗೌಡ್ರು ತಿಳಿಸಿದರು.

error: Content is protected !!