ಹರಿಹರ ಗಂಗಾನಗರ ನಿವಾಸಿಗಳನ್ನು ನಗರಸಭೆ ಜಾಗಕ್ಕೆ ಸ್ಥಳಾಂತರಿಸಲು ಆಗ್ರಹ

ಹರಿಹರ ಗಂಗಾನಗರ ನಿವಾಸಿಗಳನ್ನು ನಗರಸಭೆ ಜಾಗಕ್ಕೆ ಸ್ಥಳಾಂತರಿಸಲು ಆಗ್ರಹ

ಹರಿಹರ, ಜೂ.1- ಮಳೆ ಬಂದರೆ ಸಂಪೂರ್ಣ ಮುಳುಗಡೆಯಾಗುವ ಗಂಗಾನಗರದಲ್ಲಿರುವ ನಿವಾಸಿಗಳನ್ನು ನಗರಸಭೆ ಜಾಗಕ್ಕೆ ಸ್ಥಳಾಂತರಿಸುವಂತೆ ನಗರಸಭೆ ಸದಸ್ಯ  ಎಸ್.ಎಂ. ವಸಂತ್ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

29 ನೇ ವಾರ್ಡ್‌ನಲ್ಲಿ ಬರುವ ಗಂಗಾನಗರದಲ್ಲಿ 25ರಿಂದ 30 ಮನೆಗಳಿದ್ದು, ಮಳೆ ಬಂತೆಂದರೆ, ತುಂಗಭದ್ರಾ ನೀರು ನುಗ್ಗಿ ಸಂಪೂರ್ಣ ಮುಳುಗಡೆಯಾಗುತ್ತದೆ. ಹಾಗಾಗಿ ನಿವಾಸಿಗಳು  ಜೀವನ ನಡೆಸಲು ತುಂಬಾ ಕಷ್ಟಕರವಾಗಿರುವುದರಿಂದ ಕೂಡಲೇ ನಗರಸಭೆ ಜಾಗದಲ್ಲಿ ಅವರಿಗೆ ಮನೆಗಳನ್ನು ನಿರ್ಮಿಸಿಕೊಂಡು ಇರುವುದಕ್ಕೆ ಅವಕಾಶ ಕಲ್ಪಿಸುವಂತೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.

error: Content is protected !!