ಮಲೇಬೆನ್ನೂರು, ಮೇ 26 – ಹರಿಹರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 59,101 ಮತಗಳನ್ನು ಪಡೆದು ಪರಾಜಿತರಾಗಿರುವ ನಂದಿಗಾವಿ ಶ್ರೀನಿವಾಸ್ ಅವರಿಗೆ ಕೆ.ಪಿ.ಸಿ.ಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದು ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭೂತ ಪೂರ್ವ ಬಹುಮಾನ ದೆೊರೆತಿದೆ. ಈ ಜಯದಲ್ಲಿ ತಮ್ಮೆಲ್ಲರ ಪರಿಶ್ರಮ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ರೀತಿಯನ್ನು ಗಮನಿಸಿದ್ದೇವೆ ಎಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿರುವ ಎಲ್ಲಾ ಅಭ್ಯರ್ಥಿಗಳಿಗೆ ಬರೆದಿರುವ ಪತ್ರದಲ್ಲಿ ಶಿವಕುಮಾರ್ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನೀವು ಪರಾಜಿತರಾಗಿರಬಹುದು. ಆದರೆ, ನಿರೀಕ್ಷೆಗೂ ಮೀರಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೀರಿ ಹಾಗೂ ಪಕ್ಷವನ್ನು ಗೆಲ್ಲಿಸಲು ಎಲ್ಲಾ ರೀತಿಯಲ್ಲಿ ಸಹಕಾರ ನೀಡಿರುವುದಕ್ಕೆ ಪಕ್ಷವು ತಮ್ಮನ್ನು ಸೇರಿಸುತ್ತದೆ.
ಈ ನಿಟ್ಟಿನಲ್ಲಿ ಎಪಿಸಿಸಿ ವರಿಷ್ಠರು ಮುಂಬರುವ ಲೋಕಸಭಾ ಚುನಾವಣೆಗೆ ನಮ್ಮ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟಿರುತ್ತಾರೆ. ಆದ್ದರಿಂದ ತಾವುಗಳು ತಮ್ಮ ಸೋಲಿನ ಬಗ್ಗೆ ಎದೆಗುಂದದೆ ಮುಂಬರುವ ಎಲ್ಲಾ ಚುನಾವಣೆಗೆ ತಕ್ಷಣದಿಂದಲೇ ಪಕ್ಷವನ್ನು ಸಜ್ಜುಗೊಳಸಲು ಅಣಿಯಾಗುವಂತೆ ಶಿವಕುಮಾರ್ ಅವರು ಶ್ರೀನಿವಾಸ್ ಅವರಿಗೆ ಸೂಚಿಸಿದ್ದಾರೆ.