ಹರಪನ ಹಳ್ಳಿ, ಮೇ 26- ಕೃಷಿಗಾಗಿ ಮಾಡಿದ ಸಾಲ ತೀರಿ ಸಲು ಆಗದೆ ರೈತನೊಬ್ಬ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ತಾಲ್ಲೂಕಿನ ಹುಲಿಕಟ್ಟಿ ಗ್ರಾಮ ದಲ್ಲಿ ಇಂದು ಜರುಗಿದೆ. ಕುದುರೆ ಹನುಮಂತಪ್ಪ (53) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ಹನುಮಂತಪ್ಪ ಹಾರಕನಾಳು ವಿಎಸ್‌ಎಸ್‌ಎನ್ ಹಾಗೂ ಇತರೆ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಹಾಗೂ ಕೈಗಡ 2 ಲಕ್ಷ ಹೀಗೆ 4 ಲಕ್ಷ ರೂ. ಸಾಲವನ್ನು ಮಾಡಿದ್ದು, ಜಮೀನಿನಲ್ಲಿ ಬೆಳೆ ಬರದೆ ಸಾಲ ತೀರಿಸುವ ಕುರಿತು ಚಿಂತಿತನಾಗಿದ್ದನು ಎಂದು ಹೇಳಲಾಗಿದೆ. ಮೃತನಿಗೆ ನಾಲ್ವರು ಪುತ್ರಿಯರು, ಪುತ್ರ ಅಪಾರ ಬಂಧು-ಬಳಗ ಇದ್ದಾರೆ. ಮೃತ ರೈತನ ಮನೆಗೆ ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ್, ತಾ.ಪಂ. ಮಾಜಿ ಸದಸ್ಯ ಎಚ್.ಚಂದ್ರಪ್ಪ, ವೈ.ಕೆ.ಬಿ.ದುರುಗಪ್ಪ, ಎಚ್.ವಸಂತಪ್ಪ, ಎಸ್.ಆರ್.ತಿಮ್ಮಣ್ಣ, ಕೆ.ಅಶೋಕ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
September 9, 2024