ನಗರಕ್ಕೆ ಪಿಎಂಕೆವಿವೈ ಅಡಿ ಕೌಶಲ್ಯ ಅಭಿವೃದ್ಧಿ ಯೋಜನೆ ಮಂಜೂರು

ದಾವಣಗೆರೆ, ಮೇ 25- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 4.0 (ಪಿಎಂಕೆವಿವೈ 4.0) ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ 240 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ರೂ. 31,21,650/- ನ್ನು ಮಂಜೂರು ಮಾಡಲಾಗಿದೆ.  ಈ ಯೋಜನೆಯು ಮಾರುಕಟ್ಟೆ-ಚಾಲಿತ ಮತ್ತು ಬೇಡಿಕೆ-ಚಾಲಿತ ಕೌಶಲ್ಯ ತರಬೇತಿಗೆ ಒತ್ತು ನೀಡುತ್ತದೆ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ತಂತ್ರಜ್ಞಾನ ಮತ್ತು ಡಿಜಿಟಲೀಕರಣವನ್ನು ಬಳಸಿಕೊಳ್ಳುತ್ತದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

error: Content is protected !!