ಎಸ್ಸೆಸ್ಸೆಂ, ಲಮಾಣಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ದಾವಣಗೆರೆ, ಮೇ 25- ಮಾಜಿ ಸಚಿವ ರಾದ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ರುದ್ರಪ್ಪ ಲಮಾಣಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಹಾಗೂ ಬಂಜಾರ ಸಮುದಾಯ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದೆ. ವೇದಿಕೆ ಸಂಸ್ಥಾಪಕ ಹೆಚ್.ಕೆ. ಲಿಂಗರಾಜ್ ನಾಯ್ಕ ಮಾತನಾಡಿ, ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಹಿಂದೆ ಶಾಸಕರಾಗಿ ದಾವಣಗೆರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ದ್ದಾರೆ.   ಮತ್ತೊಬ್ಬ ಬಂಜಾರ ಸಮುದಾಯದ ನಾಯಕ ರುದ್ರಪ್ಪ ಲಮಾಣಿ ಅವರು ಸಹ ಸಚಿವರಾಗಿ, ಶಾಸಕರಾಗಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಶಶಿನಾಯ್ಕ ಪುಟಗ ನಾಳ್, ರವಿನಾಯ್ಕ, ವೆಂಕಟೇಶ್ ನಾಯ್ಕ, ಲಿಂಗರಾಜ್, ಮಂಜಾನಾಯ್ಕ ಉಪಸ್ಥಿತರಿದ್ದರು.