ಬಾತಿ ಬಳಿಯ ಅಪಘಾತ: ಸಾವು

ದಾವಣಗೆರೆ, ಮೇ 25- ದೊಡ್ಡಬಾತಿಯ ಹಾಲಿನ ಡೈರಿ ಬಳಿ ಮೊನ್ನೆ ದಿನಾಂಕ 22ರಂದು ನಡೆದ ರಸ್ತೆ ಅಪಘಾತದಲ್ಲಿ ಸುಮಾರು 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ  ಮೃತಪಟ್ಟಿದ್ದಾನೆ.

ಪಾದಚಾರಿ ಈ ವ್ಯಕ್ತಿಗೆ ಮೋಟಾರ್ ಬೈಕ್‌ನಲ್ಲಿ ಚಲಿಸುತ್ತಿದ್ದ ಶಾಂತಕುಮಾರ್‌ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತನು ಸಾವಿಗೀಡಾಗಿದ್ದಾನೆ. 

ತೆಳ್ಳನೆಯ ಮೈಕಟ್ಟು ಹೊಂದಿರುತ್ತಾನೆ. ಮೃತ ವ್ಯಕ್ತಿಯು ನೀಲಿ ಮತ್ತು ಕಪ್ಪು ಚೌಕಳಿ ಶರ್ಟ್‌, ಗೋಲ್ಡ್‌ ಕಲರ್‌ ಪ್ಯಾಂಟ್‌, ನೀಲಿ ನಿಕ್ಕರ್‌ ಧರಿಸಿರುತ್ತಾನೆ. ಮೃತನ ಎರಡೂ ಕೈಯಲ್ಲಿ ಹಚ್ಚೆ ಗುರುತು ಇರುತ್ತದೆ. ಸಂಬಂಧಪಟ್ಟವರು ಗ್ರಾಮಾಂತರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು.