ತಾಡಪಾಲು ವಿತರಣೆಗೆ ಅರ್ಜಿ ಆಹ್ವಾನ

ಹೊನ್ನಾಳಿ, ಮೇ 24- ತಾಲ್ಲೂಕಿನಲ್ಲಿ ಕೃಷಿ ಸಂಸ್ಕರಣಾ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರ ರಿಯಾಯತಿ ದರದಲ್ಲಿ ತಾಡಪಾಲುಗಳ ವಿತರಣೆ ಮಾಡಲಾಗುವುದು.

ಇದುವರೆಗೂ ತಾಡಪಾಲಿಗೆ ಅರ್ಜಿ ಸಲ್ಲಿಸದ ರೈತರು ತಮ್ಮ ಭಾಗದ ರೈತ ಸಂಪರ್ಕ ಕೇಂದ್ರದಲ್ಲಿ ನಾಡಿದ್ದು ದಿನಾಂಕ 26 ರಂದು ಅರ್ಜಿ ಸಲ್ಲಿಸಲು  ಕೊನೆಯ ದಿನವಾಗಿದೆ. ವಿವರಕ್ಕೆ ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.