ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಮೇ 24- ಕ್ಷತ್ರೀಯ ಮರಾಠ ವಿದ್ಯಾ ಮತ್ತು ಕಲ್ಯಾಣಾಭಿವೃದ್ಧಿ ಟ್ರಸ್ಟ್‌ ವತಿಯಿಂದ 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 75 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವ ಕ್ಷತ್ರಿಯ ಮರಾಠ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ.

ಅರ್ಹ ವಿದ್ಯಾರ್ಥಿನಿಯರು ಇಂದಿನಿಂದ ಬರುವ ಜೂನ್ 25 ರವರೆಗೆ ಟ್ರಸ್ಟ್‌ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಜನ ಸಂಪರ್ಕ ಕಚೇರಿ, ಹೊಂಡದ ಸರ್ಕಲ್‌ ಅಥವಾ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ ಹಾಸ್ಟೆಲ್‌, ಹದಡಿ ರಸ್ತೆ, ದಾವಣಗೆರೆ ಅಥವಾ ಭರಣಿ ಹೋಟೆಲ್‌ ಮಾಲೀಕರಾದ ಜಿ.ಎಂ. ಪರಶುರಾಮರಾವ್‌ ಸಾಳಂಕಿ ಅಥವಾ ಶ್ರೀ ಕೃಷ್ಣಾ ಭವಾನಿ ಕಲ್ಯಾಣ ಮಂಟಪ, ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌, ಆವರಣ, ದಾವಣಗೆರೆ ಇಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 5 ರೊಳಗೆ ಸಂಘದ ಕಚೇರಿಗೆ ತಲುಪಿಸಬೇಕು.  

ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 94480-05060, 98807-29429, 94483-09883, 98806-42030.