ಇನ್‌ಸೈಟ್ಸ್‌ನ 23 ಅಭ್ಯರ್ಥಿಗಳು ಯು.ಪಿ.ಎಸ್.ಸಿ. ಉತ್ತೀರ್ಣ

ದಾವಣಗೆರೆ, ಮೇ 23 – ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2022ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ದೇಶದಾದ್ಯಂತ ಇನ್‌ಸೈಟ್ಸ್‌ನಲ್ಲಿ ತರಬೇತಿ ಪಡೆದ 210ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

 ಕರ್ನಾಟಕ ರಾಜ್ಯದಿಂದ ಈ ಬಾರಿ 30 ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣ ಗೊಂಡಿ ದ್ದು, ಇದರಲ್ಲಿ ಉತ್ತಮ ರಾಂಕಿಂಗ್ ಪಡೆದ 23 ಅಭ್ಯರ್ಥಿ ಗಳಿಗೆ ತರಬೇತಿ, ಮಾರ್ಗದರ್ಶನ ನೀಡಿರುವುದು ಬೆಂಗ ಳೂರಿನ ಇನ್‌ಸೈಟ್ಸ್‌ ಐಎಎಸ್ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.

ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾದ ಈ ಅಭ್ಯರ್ಥಿಗಳಲ್ಲಿ ಹಲವರು ‘ಇನ್‌ಸೈಟ್ಸ್‌ ಐಎಎಸ್’ನ ನೇರವಾದ ಬೋಧನಾ ತರಗತಿಗೆ (ಒಜಿಪಿ, ಕೋರ್ ಬ್ಯಾಚ್) ಹಾಜರಾಗಿದ್ದರೆ, ಬಹಳಷ್ಟು ಅಭ್ಯರ್ಥಿಗಳು  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷಾ ಸರಣಿ ಮತ್ತು ಅಣಕು ಸಂದರ್ಶನಗಳಂತಹ ಹಲವಾರು ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳಿಗೆ ಬೋಧನೆ ಮತ್ತು ಉತ್ತರ ಬರೆಯುವುದು ಸೇರಿದಂತೆ ಕೌಶಲ್ಯ ವೃದ್ಧಿಯ ಬಗ್ಗೆ ಇನ್‌ಸೈಟ್ಸ್ ಐಎಎಸ್ ಕೇಂದ್ರದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದ್ದು, ಒಟ್ಟಾರೆಯಾಗಿ ‘ಇಂಟೆಗ್ರೇಟೆಡ್‌ ಕೋಚಿಂಗ್‌ ಮಾದರಿ’ ಯಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.

ಐಎಎಸ್, ಐಪಿಎಸ್‌ ಮಾಡಲು ಮುಖ್ಯವಾಗಿ ಮನೋಬಲ ಮುಖ್ಯ. ಯುಪಿಎಸ್‌ಸಿ ಪರೀಕ್ಷೆ ಬರೆಯುವವರು ಎಷ್ಟು ಜನರಿದ್ದರೂ ಅವರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಐಎಎಸ್‌ ಅಧಿಕಾರಿಯಾಗುತ್ತೇನೆ ಎಂಬ ಮಹತ್ವಾಕಾಂಕ್ಷೆ ಇರಬೇಕು.ಮಹತ್ವಾಕಾಂಕ್ಷೆಯೇ ನಿಮ್ಮಲ್ಲಿ ದೊಡ್ಡ ಕನಸು ಹುಟ್ಟಿಸುತ್ತದೆ. ಸಾಧಿಸುವ ಮನಸ್ಸಿದ್ದರೆ ಸಾಕು ಬಡತನ, ಗ್ರಾಮೀಣ ಪ್ರದೇಶದ ಹಿನ್ನೆಲೆಯಂತಹವು ಯು.ಪಿ.ಎಸ್.ಸಿ ಪಾಸಾಗಲು ಅಡ್ಡಿಯಾಗುವುದಿಲ್ಲ. ಆದರೆ ಅಭ್ಯರ್ಥಿಗಳು ಸಂವಹನ ಕೌಶಲ್ಯವನ್ನು ಉತ್ತಮಗೊಳಿಸಿಕೊಳ್ಳುವುದು ಕಡ್ಡಾಯ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷಾ ತಯಾರಿಯನ್ನು ಸರಳೀಕರಿಸಲು ಮತ್ತು ಯಶಸ್ಸು ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯು ಸತತವಾಗಿ ಶ್ರಮಿಸುತ್ತಿದೆ ಎಂದು ವಿನಯ್ ಕುಮಾರ್ ತಿಳಿಸಿದ್ದಾರೆ.

  2014 ರಿಂದ ಯುಪಿಎಸ್‌ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ದೆಹಲಿ, ಶ್ರೀನಗರ, ಲಕ್ನೋ, ಹೈದರಾಬಾದ್, ಧಾರವಾಡ, ಮೈಸೂರು ಸೇರಿದಂತೆ ಭಾರತದಾದ್ಯಂತ ಶಾಖೆಗಳನ್ನು ಹೊಂದಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಶಾಖೆಯಲ್ಲಿನ ವಿದ್ಯಾರ್ಥಿಯಾಗಿರುವ ಮನನ್ ಭಟ್ 231 ನೇ ಶ್ರೇಯಾಂಕ ಪಡೆದಿರುವುದು ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿದೆ ಎಂದವರು ತಿಳಿಸಿದ್ದಾರೆ.

ಇನ್‌ಸೈಟ್ಸ್ ಐಎಎಸ್ ಸಂಸ್ಥೆಯಿಂದ ಆಯ್ಕೆಯಾದ ಕರ್ನಾಟಕದ ಅಭ್ಯರ್ಥಿಗಳು : ಡಿ. ಸೂರಜ್, ಸೌರಭ್ ಎ. ನರೇಂದ್ರ, ಎ.ಎಲ್. ಆಕಾಶ್, ಪಿ. ಶ್ರವಣ್ ಕುಮಾರ್, ಆರ್. ಚಲುವರಾಜು, ಕೆ. ಸೌರಭ್, ಧಾಮಿನಿ ಎಂ. ದಾಸ್, ಶ್ರುತಿ ಯರಗಟ್ಟಿ, ಎಂ. ಪೂಜಾ, ಜೆ. ಭಾನು ಪ್ರಕಾಶ್, ಸಿ. ಸಮೀರ್ ರಾಜಾ, ಟಿ. ಕೈಲಾಶ್, ಬಿ. ಧನುಶ್ ಕುಮಾರ್, ಬಿ.ವಿ. ಶ್ರೀದೇವಿ, ಆದಿನಾಥ್ ತಮದಡ್ಡಿ, ಜೋಶಿ ವಿಕ್ರಮ್ ನರಸಿಂಹ, ಐ.ಎನ್. ಮೇಘನ, ಸಿ.ಪಿ. ನಿಮಿಷಾಂಬ, ಆರ್. ರಾಹುಲ್, ಎಂ.ಎಸ್. ತನ್ಮಯ್, ಮೊಹಮ್ಮದ್ ಸಾಧಿಕ್ ಶರೀಫ್, ನಗುಲ ಕೃಪಾಕರ್, ಯಲಗುರೇಶ್ ಅರ್ಜುನ ನಾಯಕ್.

error: Content is protected !!