ಹರಿಹರಕ್ಕೆ ಇಂದು ಬಸವರಾಜ ದೇಶಿ ಕೇಂದ್ರ ಸ್ವಾಮೀಜಿ

ಶ್ರೀ ಕ್ಷೇತ್ರ ಐರಣಿ ಹೊಳೆಮಠದ ಶ್ರೀ ಸ್ವಾಮಿ ಪರಮಹಂಸ ಸದ್ಗುರು ಮುಪ್ಪಿನಾರ್ಯ ಮಹಾತ್ಮಾಜೀ ಅವರ 39ನೇ ಪುಣ್ಯರಾಧನೆ ಪ್ರಯುಕ್ತ ವಿದ್ಯಾನಗರದಲ್ಲಿರುವ ಶ್ರೀ ಕ್ಷೇತ್ರ ಐರಣಿ ಶಾಖಾ ಮಠದಲ್ಲಿ ಇಂದಿನಿಂದ ಇದೇ ದಿನಾಂಕ 28 ರವರೆಗೆ ನಾಲ್ಕು ದಿನಗಳ ಕಾಲ ಮಠದಲ್ಲಿ ಐರಣಿ ಮಠದ ಶ್ರೀಗಳು ವಾಸ್ತವ್ಯ ಮಾಡಲಿದ್ದಾರೆ.

ದಿನಾಂಕ 8.6.2023 ರಿಂದ  22.6.2023 ರವರೆಗೆ  ನಡೆಯುವ  ಶ್ರೀ ಕ್ಷೇತ್ರ ಐರಣಿ ಹೊಳೆಮಠ ಶ್ರೀ ಸ್ವಾಮಿ ಪರಮಹಂಸ ಸದ್ಗುರು ಮುಪ್ಪಿನಾರ್ಯ ಮಹಾತ್ಮಜೀ ಅವರ 39ನೇ ಪುಣ್ಯರಾಧನೆ ಪ್ರಯುಕ್ತ ಶ್ರೀ ಸದ್ಗುರು ಬಸವರಾಜ ದೇಶಿ ಕೇಂದ್ರ ಮಹಾತ್ಮಜಿಯವರು ಇಂದು ಸಂಜೆ 4.30ಕ್ಕೆ ಶ್ರೀ ಕ್ಷೇತ್ರ ಐರಣಿ ಹೊಳೆಮಠ ವಿದ್ಯಾನಗರ ಹರಿಹರಕ್ಕೆ ಬಂದು ನಾಲ್ಕು ದಿನಗಳ ಕಾಲ ವಾಸ್ತವ್ಯ ಮಾಡಲಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ನಾಗರಾಜ್ ಮೆಹರ್ವಾಡೆ ತಿಳಿಸಿದ್ದಾರೆ.