ಈಜುಕೊಳದಲ್ಲಿ ಬಾಲಕರು ಮೃತಪಟ್ಟ ಪ್ರಕರಣ: ವರದಿ ನೀಡುವಂತೆ ಡಿಸಿ ಸೂಚನೆ

ದಾವಣಗೆರೆ, ಮೇ 23- ನಗರದ ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಈಜುಕೊಳದಲ್ಲಿ ಇಬ್ಬರು ಬಾಲಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ, ಸುದೀರ್ಘವಾದ ವಿಚಾರಣೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಈಜು ಕೊಳದಲ್ಲಿ ತಾಜುದ್ದೀನ್ ಹಾಗೂ ಮುಬಾರಕ್ ಅವರು ಮೃತಪಟ್ಟಿದ್ದು, ಈಜುಕೊಳದಲ್ಲಿ ಯಾವುದೇ ಮುನ್ನೆಚ್ಚರಿಕೆ ರಕ್ಷಣಾ ವ್ಯವಸ್ಥೆ ಹಾಗೂ ತರಬೇತಿದಾರರನ್ನು ನಿಯೋಜಿಸದೇ ನಿರ್ಲಕ್ಷ್ಯ ವಹಿಸಿರುವುದೇ ಬಾಲಕರ ಸಾವಿಗೆ ಕಾರಣವಾಗಿದ್ದು, ನಿರ್ಲಕ್ಷಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪೋಷಕರು ನೀಡಿದ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

error: Content is protected !!